ಈಗ ನೀವು WhatsApp ಕ್ಯಾಮರಾ ಮೂಲಕ ಸುಲಭವಾಗಿ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಕಳುಹಿಸಬಹುದು. ಆದರೆ ಈ ವೈಶಿಷ್ಟ್ಯವು ಎಲ್ಲಾ WhatsApp ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ. ಈ ವೈಶಿಷ್ಟ್ಯವು ಐಫೋನ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ಮೆಟಾ ತಿಳಿಸಿದೆ. ಆದರೆ ಈ ಸೇವೆಯು ಇತರ ಬಳಕೆದಾರರಿಗೆ ಲಭ್ಯವಾಗುತ್ತದೆಯೇ ಎಂಬುದರ ಕುರಿತು ಕಂಪನಿಯು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


COMMERCIAL BREAK
SCROLL TO CONTINUE READING

ನಾವೆಲ್ಲರೂ ಹೆಚ್ಚು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ  WhatsAp ಕೂಡ ಒಂದಾಗಿದೆ. ಇದೀಗ WhatsApp ಹೊಸ ವೈಶಿಷ್ಟ್ಯದೊಂದಿಗೆ ಬಂದಿದೆ. ಈ ವೈಶಿಷ್ಟ್ಯವನ್ನು ಈಗ ಪರಿಚಯಿಸಲಾಗಿದ್ದು, ಇದು ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಉಪಯುಕ್ತವಾಗಿದೆ. ಕಂಪನಿಯು ಡಾಕ್ಯುಮೆಂಟ್ ಸ್ಕ್ಯಾನಿಂಗ್ ವೈಶಿಷ್ಟ್ಯವನ್ನು ಪರಿಚಯಿಸುತ್ತದೆ.


ವಾಟ್ಸಾಪ್ ಕ್ಯಾಮೆರಾ ಮೂಲಕ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದು ಮತ್ತು ಕಳುಹಿಸಬಹುದು. ಆದರೆ ಈ ವೈಶಿಷ್ಟ್ಯವು ಎಲ್ಲಾ WhatsApp ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ. ಈ ವೈಶಿಷ್ಟ್ಯವು ಐಫೋನ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ಮೆಟಾ ತಿಳಿಸಿದೆ.


ಇತರ ಬಳಕೆದಾರರಿಗೆ ಲಭ್ಯವಾಗುತ್ತದೆಯೇ ಎಂಬುದರ ಕುರಿತು ಕಂಪನಿಯು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಆದರೆ  ಈ ವೈಶಿಷ್ಟ್ಯವು ಭವಿಷ್ಯದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಸಹ ಲಭ್ಯವಿರುತ್ತದೆ.ಹೇಗೆ? 


ಸದ್ಯ ಇದು iOS 24.25.89 ಆವೃತ್ತಿಯಲ್ಲಿ ಲಭ್ಯವಿದೆ. ಹೊಸ ವೈಶಿಷ್ಟ್ಯವು ಕ್ರಮೇಣ ಎಲ್ಲಾ ಫೋನ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಘೋಷಿಸಿದೆ. 


ಐಫೋನ್‌ನಲ್ಲಿ WhatsApp ಓಪನ್ ಮಾಡಿ. ಮತ್ತು ಹೊಸ ವೈಶಿಷ್ಟ್ಯವನ್ನು ನೋಡಲು ಕೆಳಗಿನ ಬಾರ್‌ನಲ್ಲಿರುವ ಪ್ಲಸ್ ಬಟನ್ ಕ್ಲಿಕ್ ಮಾಡಿ. ಅದರಲ್ಲಿ ದಾಖಲೆಗಳನ್ನು ಆಯ್ಕೆ ಮಾಡಬೇಕು. 'ಸ್ಕ್ಯಾನ್ ಡಾಕ್ಯುಮೆಂಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಅಪ್ಲಿಕೇಶನ್‌ನಲ್ಲಿನ ಕ್ಯಾಮರಾವನ್ನು ಬಳಸಿಕೊಂಡು ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಬಹುದು.